ಫೇಸ್‍ಬುಕ್'ನಲ್ಲಿ ಸಚಿವ ಖರ್ಗೆ ವಿರುದ್ಧ ಅವಹೇಳನಕಾರಿ ಕಮೆಂಟ್: ವ್ಯಕ್ತಿಯ ಬಂಧನ

ಲೋಕಬಂಧು ನ್ಯೂಸ್, ಕಾರ್ಕಳ, ಜೂ. 7
ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಫೇಸ್‍ಬುಕ್'ನಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದಲ್ಲಿ ಕೆರ್ವಾಶೆ ನಲ್ಕೆದಬೆಟ್ಟು ಸುಧೀರ ಬಂಗೇರ (48)ನನ್ನು ಕಾರ್ಕಳ ನಗರ ಠಾಣಾ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈ ಕುರಿತು ನಿಟ್ಟೆ ಅತ್ತೂರು ಚೇತನಹಳ್ಳಿ ನಿವಾಸಿ ಸುರೇಶ ಎಂಬವರು ದೂರು ನೀಡಿದ್ದರು.ಅವರು ಜೂ. 7ರಂದು ತನ್ನ ಮೊಬೈಲ್'ನಲ್ಲಿ ನಮ್ಮ ಕಾರ್ಲ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಪೋಟೊ ಹಾಕಿ  ಅದರಲ್ಲಿ 'ಆರ್.ಎಸ್.ಎಸ್  ಇನ್ನು ಎರಡು ವರ್ಷ ಅವಧಿಯಲ್ಲಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ  ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ- ಪ್ರಿಯಾಂಕ ಖರ್ಗೆ' ಎಂಬ ಪೋಸ್ಟಿಗೆ ಸುಧೀರ್ ಬಂಗೇರ ಜೂ. 6ರಂದು ದಲಿತ ಸಚಿವನ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್ ಹಾಕಿದ್ದು, ಅದು ಇತರ ಗುಂಪುಗಳ  ನಡುವೆ ವೈರತ್ವ, ದ್ವೇಷ ಹಾಗೂ ಅವಮಾನ ಮೂಡಿಸುವ ರೀತಿಯಲ್ಲಿದ್ದು ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಮಾಡುವಂತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿ ಸುಧೀರ ಬಂಗೇರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.