ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.15
ಪೇಜಾವರ ಮಠ ಆಶ್ರಯದಲ್ಲಿ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಧಿಕ ಮಾಸದ ಕೊನೆಯ ದಿನವಾದ ಸೋಮವಾರ 33 ಕುಂಡಗಳಲ್ಲಿ ಪವಮಾನ ಸೂಕ್ತ ಹೋಮ ನಡೆಯಿತು.
ಇದೇ ಸಂದರ್ಭದಲ್ಲಿ ಕಳೆದ 33 ದಿನಗಳಿಂದ ನಡೆದ ಸಮಸ್ತ ಜ್ಞಾನಯಜ್ಞ, ದ್ರವ್ಯಯಜ್ಞ ಮೊದಲಾದ ಧರ್ಮಕಾರ್ಯಗಳನ್ನು ಸಂಪನ್ನಗೊಳಿಸಲಾಯಿತು.
