ಜಮೀಯ್ಯತುಲ್ ಫಲಾಹ್ ವತಿಯಿಂದ ಬ್ಯಾಗ್ ಪುಸ್ತಕ ಕೊಡೆ ವಿತರಣೆ

ಲೋಕಬಂಧು ನ್ಯೂಸ್ | ಕಾರ್ಕಳ, ಜೂ.15
ಜಮೀಯ್ಯತುಲ್ ಫಲಾಹ್ ಕಾರ್ಕಳ ಘಟಕ ವತಿಯಿಂದ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಸೋಮವಾರ ನೋಟ್ ಪುಸ್ತಕ, ಶಾಲಾ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಲಾಯಿತು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಅಶ್ಪಕ್ ಅಹಮದ್ ಮಾತನಾಡಿ, 140 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದು ಸಂತೋಷದ ವಿಚಾರ. ಇದೇ ಶಾಲೆಯ ಹಳೆವಿದ್ಯಾರ್ಥಿ 
ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದೂ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಶಾಲೆ ಹಾಗೂ ದೇಶಕ್ಕೆ ಉತ್ತಮ ಹೆಸರು ತರಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.


ನೋಟ್ ಪುಸ್ತಕಗಳ ದಾನಿ ಜಮೀಯ್ಯತುಲ್ ಫಲಾಹ್ ಕಾರ್ಕಳ ಘಟಕ ಅಧ್ಯಕ್ಷ, ಉದ್ಯಮಿ ಮೊಹಮ್ಮದ್ ಗೌಸ್ ಅಧ್ಯಕ್ಷತೆ ವಹಿಸಿದ್ದರು.


ಬ್ಯಾಗ್'ಗಳನ್ನು ಕೊಡುಗೆಯಾಗಿ ನೀಡಿದ ಆಯೇಷಾ ಜ್ಯುವೆಲ್ಲರ್ಸ್ ಮಾಲಕ ಮೊಹಮ್ಮದ್ ಅಸ್ಲಂ, ಕೊಡೆ ನೀಡಿದ ದಾನಿ ನದೀಂ ಕುಂಟಲ್ಪಾಡಿ ಮುಖ್ಯ ಅತಿಥಿಗಳಾಗಿದ್ದರು.


ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಕ್ ಬೈಲೂರು, ಸಮಾಜ ಸೇವಕ ಅಮೀರ್ ಹುಸೇನ್ ಕರಿಯಕಲ್ಲು, ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಅಬ್ದುಲ್ಲಾ ಅದಂ ಶೇಕ್, ಜಮೀಯ್ಯತುಲ್ ಪಲಾಹ್ ಉಪಾಧ್ಯಕ್ಷ ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಸದಸ್ಯರಾದ ಇಜಾಜ್ ಶರೀಫ್ ಸಾಲ್ಮರ, ಮುನೀರ್ ಅಹ್ಮದ್ ತೆಳ್ಳಾರು, ತಾಜ್ ಮಹಮ್ಮದ್, ಎನ್ಆರ್.ಸಿ.ಸಿ ಸದಸ್ಯ ಮೊಹಮ್ಮದ್, ಕಾರ್ಕಳ ಮುಸ್ಲಿಮ್ ಜಮಾತ್ ಸದಸ್ಯ ಇಬ್ರಾಹಿಂ, ಶಾಲಾ ಪ್ರಭಾರ ಮುಖ್ಯೊಪಾಧ್ಯಾಯಿನಿ ಸಾಯಿರಾ ಬಾನು, ಎಸ್.ಡಿ.ಎಂ.ಸಿ ಅಧ್ಯಕ್ಷ ರಿಯಾಜ್ ಮೊದಲಾದವರಿದ್ದರು.