ಕೃಷ್ಣಮಠಕ್ಕೆ ಅನಂತ್ ಅಂಬಾನಿ ಭೇಟಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.14
ರಿಲಯನ್ಸ್ ಸಮೂಹ ಸಂಸ್ಥೆ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಅನಂತ್ ಅಂಬಾನಿ ಭಾನುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಹಾಗೂ ಪಂಡಿತ್ ಚಂದ್ರಶೇಖರ ಶರ್ಮ, ಕರ್ನಾಟಕದ ರಿಲಯನ್ಸ್ ಜಿಯೋ ವ್ಯವಸ್ಥಾಪಕ ಧನಂಜಯ ಆರ್. ಶಿವನಂದನ, ಯು ಎಸ್. ಮಾಧವ ಶಾನುಭಾಗ್, ಜಯಪ್ರಕಾಶ್ ಶೆಟ್ಟಿ, ಮುಂಬೈ ಉದ್ಯಮಿ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.