ಲೋಕಬಂಧು ನ್ಯೂಸ್ | ಉಡುಪಿ, ಜೂ.15
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಹಯೋಗದೊಂದಿಗೆ ಪುರುಷೋತ್ತಮ ಮಾಸದ ಕೊನೆಯ ದಿನವಾದ ಸೋಮವಾರ ರಾಜಾಂಗಣದಲ್ಲಿ ದಾಸರ ಪದಗಳ 33 ಭಜನಾ ಕೃತಿಗಳ ಸಾಮೂಹಿಕ ಗೀತ ಗಾಯನ ಭಜನಾಮೃತ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಲಿಯುಗದಲ್ಲಿ ಭಗವಂತ ಭಜನೆಗೆ ಬೇಗನೇ ಒಲಿಯುತ್ತಾನೆ. ಅಧಿಕ ಮಾಸದಲ್ಲಿ ಮಾಡುವ ಭಗವತ್ಕಾರ್ಯಗಳಿಗೆ ಅಧಿಕ ಫಲ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ ಎಂದರು.
.jpg)
.jpg)
.jpg)