ಹಿರೇಬೆಟ್ಟು ಮಹಾಲಿಂಗೇಶ್ವರ ದೇವಳ ಜಿರ್ಣೋದ್ಧಾರ ಶಿಲಾನ್ಯಾಸ

ಲೋಕಬಂಧು ನ್ಯೂಸ್ | ಹಿರಿಯಡಕ, ಜೂ.26
ಹಿರೇಬೆಟ್ಟು ಭಟ್ರಕೋಡಿ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರ ಕಾರ್ಯದಂಗವಾಗಿ ಶಿಲಾಮಯ ಗರ್ಭಗೃಹ ನಿರ್ಮಾಣಕ್ಕೆ ಬಳಸುವ ನೂತನ ಶಿಲೆಗಳಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಮ್ ಎಂ.ಪುರುಷೋತ್ತಮ್ ಬುಧವಾರ ಚಾಲನೆ ನೀಡಿದರು.
ಶ್ರೀಕ್ಷೇತ್ರದ ತಂತ್ರಿಗಳಾದ ಮಂಗಳೂರಿನ ವಿದ್ವಾನ್ ಡಾ.ಸತ್ಯಕೃಷ್ಣ ಭಟ್  ನೇತೃತ್ವದಲ್ಲಿ ಶಿಲಾನ್ಯಾಸದ ಶಿಲೆಗಳಿಗೆ ಅರಶಿನ, ಕುಂಕುಮ, ಹಾಲು, ಹೂ ಸಮರ್ಪಿಸಿ, ಸ್ವತಃ ನ್ಯಾಯಾಧೀಶರೇ ಆರತಿ ಬೆಳಗುವ ಮೂಲಕ ಶುಭ ಕಾರ್ಯಕ್ಕೆ ನಾಂದಿಹಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಕೀಲ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ನಾಯಕ್, ಪ್ರಮುಖರಾದ ಸೀತಾರಾಮ ಭಟ್, ಜಯಪ್ರಕಾಶ ನಾಯಕ್, ಶಂಕರ ನಾಯಕ್, ಚಂದ್ರಶೇಖರ ನಾಯಕ್, ಸುಂದರ ಮೂಲ್ಯ, ನಾರಾಯಣ ಪೂಜಾರಿ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದನ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ದಿನೇಶ್ ಪ್ರಭು, ಡಾ.ಕೃಷ್ಣಮೂರ್ತಿ, ಕೇಶವ ಭಂಡಾರಿ, ಗೋಪಾಲ ನಾಯಕ್, ಕೇಶವ ನಾಯಕ್, ನಂದಕುಮಾರ್, ಮಹಾದೇವ ಭಟ್, ಮುರಳೀಧರ ಲಾಗ್ವಂಕರ್, ವಸಂತ ನಾಯಕ್, ಸುರೇಶ್ ಭಟ್ ಮೊದಲಾದವರಿದ್ದರು.