ನೀಟ್ ಪರೀಕ್ಷೆ: ಉಡಿದಾರ ಶಿವದಾರ ಜನಿವಾರ ತೆಗೆಸಿ ಎಸೆದರು!

ಲೋಕಬಂಧು ನ್ಯೂಸ್ ದಾವಣಗೆರೆ, ಜೂ.22
ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಭಾನುವಾರ ನಡೆಸಿದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮೈಮೇಲಿದ್ದ ದಾರಗಳಿಗೆ ಸಿಬ್ಬಂದಿ ಕತ್ತರಿ ಹಾಕಿದರು. ಉಡಿದಾರ, ಶಿವದಾರ ಹಾಗೂ ಜನಿವಾರಗಳನ್ನು ತೆಗೆಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.ನಗರದ ಹೈಸ್ಕೂಲ್ ಮೈದಾನದಲ್ಲಿನ ಬಾಲಕರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಪರೀಕ್ಷಾರ್ಥಿಗಳನ್ನು ಸಿಬ್ಬಂದಿ ಮೂರು ಹಂತಗಳಲ್ಲಿ ತಪಾಸಣೆಗೊಳಪಡಿಸಿದರು. ಉಡಿದಾರವನ್ನು ತೆಗೆದು ಬುಟ್ಟಿಯೊಂದಕ್ಕೆ ಹಾಕಿದರು. ರುದ್ರಾಕ್ಷಿ, ಬೆಲ್ಟ್, ಉಂಗುರ, ಸರಗಳನ್ನು ತೆಗೆಸಲಾಯಿತು. ತುಂಬು ತೋಳಿನ ಅಂಗಿ ಧರಿಸಿದವರಿಗೆ ಪ್ರವೇಶಾವಕಾಶ ನೀಡಲಿಲ್ಲ. ಬುರ್ಖಾ ತೆಗೆಸಿ ನೀಟ್ ಪರೀಕ್ಷೆಗೆ ಅವಕಾಶ ಕಲ್ಪಿಸಿದರು.