ಅವಘಡ ತಪ್ಪಿಸಿದ ವಿದ್ಯಾರ್ಥಿಗೆ ಅಭಿನಂದನೆ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.17
ಇಲ್ಲಿನ ಮಾಧವ ಕೃಪಾ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ  ಅಂಶೆಲ್ ಶರುನ್ ತನ್ನ ಶಾಲಾ ಬಸ್ಸಿನ ಚಾಲಕ ಚಾಲನೆ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೀಡಾಗಿ ಬಸ್ ನಿಯಂತ್ರಣ ತಪ್ಪಿದಾಗ ತಕ್ಷಣ  ಹ್ಯಾಂಡ್ ಬ್ರೇಕ್ ಹಾಕಿ  ಭಾರೀ ಅವಘಡವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದ.
ಶಾಲಾ ಬಸ್ಸಿನಲ್ಲಿದ್ದ 40 ವಿದ್ಯಾರ್ಥಿಗಳನ್ನು ಅಪಾಯದಿಂದ ರಕ್ಷಿಸಿದ  ವಿದ್ಯಾರ್ಥಿ ಅಂಶೆಲ್ ಶರುನ್'ನನ್ನು ಶಾಸಕ ಯಶಪಾಲ್ ಸುವರ್ಣ ಬುಧವಾರ ಶಾಲೆಗೆ ಭೇಟಿ ನೀಡಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ  ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾದ
 ಜಿಲ್ಲಾಧ್ಯಕ್ಷ ರುಡಾಲ್ಫ್ ಡಿ'ಸೋಜಾ, ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ  ಶ್ರೀವತ್ಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇನ್ಹಸ್,  ಯುವ ಮೋರ್ಚಾ ಪದಾಧಿಕಾರಿಗಳಾದ ನಿತಿನ್ ಪೈ, ಧನುಷ್ ಬಿ. ಕೆ. ಮತ್ತು ಭೂಷಣ್ ಕುಮಾರ್, ಶಾಲಾ ವ್ಯವಸ್ಥಾಪಕ ರಮೇಶ್ ಭಟ್ ಮೊದಲಾದವರಿದ್ದರು.