ವಡಭಾಂಡೇಶ್ವರ ದೇವಳದಲ್ಲಿ ಸೀಯಾಳ ಅಭಿಷೇಕ

ಲೋಕಬಂಧು ನ್ಯೂಸ್ | ಮಲ್ಪೆ, ಜೂ.15
ಪುರುಷೋತ್ತಮ ಮಾಸದ ಕೊನೆಯ ದಿನವಾದ ಸೋಮವಾರ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ದೇವರಿಗೆ ಸೀಯಾಳ ಅಭಿಷೇಕ ಮಾಡಲಾಯಿತು.
ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಲಾಯಿತು.
ದೇವಳದ ಆಡಳಿತ ಮಂಡಳಿ ಮುಖ್ಯಸ್ಥ ಶ್ರೀನಿವಾಸ ಭಟ್, ಶ್ರೀವರ ಭಟ್, ಶ್ರೀ ಹರಿ ಬಾದ್ಯ, ನಾಗರಾಜ ಮೂಲಿಗಾರ್ ಮೊದಲಾದವರಿದ್ದರು.