ಮದ್ಯಪಾನಿ ಚಾಲಕನಿಗೆ ನ್ಯಾಯಾಂಗ ಬಂಧನ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.26
ಇಲ್ಲಿನ ಈಶ್ವರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ, ಅಪಘಾತಪಡಿಸಿದ ವ್ಯಕ್ತಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜೂ.19ರಂದು ಅಲೆವೂರು ಕರ್ವಾಲು ನಿವಾಸಿ ಅಭಿಷೇಕ್ ನಾಯಕ್ (21) ಸ್ಕೂಟಿಯಲ್ಲಿ ಮಣಿಪಾಲದಿಂದ ಕೆಳಪರ್ಕಳದಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಮಣಿಪಾಲ ಸಾಯಿಸಾಗರ್ ಹೋಟೆಲ್ ಎದುರಿನ ಯೂ ಟರ್ನ್ ರಸ್ತೆ ಬಳಿ ರಾತ್ರಿ ಸುಮಾರು 10 ಗಂಟೆ ವೇಳೆಗೆ ಮಣಿಪಾಲ ಎಂಐಟಿ ಕಡೆಯಿಂದ ಆರೋಪಿ ಕಾರ್ಕಳ ಮುಡಾರು ನಿವಾಸಿ ಸಮೇಗ್ದ್ ಎಲ್.ಜೆ. (25) ಎಂಬಾತ ಮದ್ಯಪಾನ ಮಾಡಿಕೊಂಡು ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಅಭಿಷೇಕ್ ನಾಯಕ್ ಅವರ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು, ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯವಾಗಿತ್ತು.


ಆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಸಮೇಗ್ದ್'ಗೆ ನ್ಯಾಯಾಂಗ ಬಂಧನ ವಿಧಿಸಿದೆ.