ಕೊಡವೂರು ದೇವಳ ಸಿಬಂದಿ ನಾಪತ್ತೆ

ಲೋಕಬಂಧು ನ್ಯೂಸ್ | ಮಲ್ಪೆ, ಜೂ.15
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ (49) ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಅವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಜೂ.12ರಂದು ಬೆಳಿಗ್ಗೆ 8 ಗಂಟೆ ವೇಳೆಗೆ ವೆಂಕಟಕೃಷ್ಣ ಅವರು ಕೊಡವೂರು ಕೆರೆಕಟ್ಟೆ ಗಣಪತಿ ದೇವಸ್ಥಾನದಿಂದ ಹೊರಟಿದ್ದರು. ಅದಾದ ಬಳಿಕ ಅವರು ಶಂಕರನಾರಾಯಣ ದೇವಸ್ಥಾನಕ್ಕೂ ಬಾರದೇ ತನ್ನ ಮನೆಗೂ ಮರುಳದೇ ನಾಪತ್ತೆಯಾಗಿದ್ದಾರೆ. ಬಂಧುಮಿತ್ರರು ಹಾಗೂ ಪರಿಚಿತರಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.