ಲೋಕಬಂಧು ನ್ಯೂಸ್ | ಉಡುಪಿ, ಜೂ.18
ಕುಕ್ಕಿಕಟ್ಟೆ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ಠಳಾಭಾವ ಇರುವುದನ್ನು ಗಮನಿಸಿದ ಮಣಿಪಾಲ ಸುನಿಧಿ ಫೌಂಡೇಶನ್ ಟ್ರಸ್ಟ್, ಶಾಲೆಯ ಮನವಿಗೆ ಸ್ಪಂದಿಸಿ ಸಿಎಸ್ಆರ್ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಕೊಠಡಿಯನ್ನು ಸಂಸ್ಥೆ ಕಾರ್ಯದರ್ಶಿ ರೂಪಶ್ರೀ ಗುರುವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ದಿ ಸಮಿತಿ ಗೌರವಾಧ್ಯಕ್ಷ ಕೆ.ಅಣ್ಣಯ್ಯ ಸೇರಿಗಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀಧರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಕುಮಾರ್, ಬಾಲನಿಕೇತನ ಅಧ್ಯಕ್ಷ ರಾಮಚಂದ್ರ, ಇಂಜಿನಿಯರ್ ನಿರಂಜನ್ ಆಗಮಿಸಿ, ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಸ್ವಾಗತಿಸಿ, ವಂದಿಸಿದರು.
.jpg)
.jpg)