ಅಲ್ಜೈಮರ್ಸ್ ದಿನಾಚರಣೆ

ಲೋಕಬಂಧು ನ್ಯೂಸ್  ಉಡುಪಿ, ಸೆ.24
ಕಮಲ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಆಶ್ರಯದಲ್ಲಿ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ರೋಟರಿ ಮಣಿಪಾಲ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ- ಕರಾವಳಿ ಹಾಗೂ ಉಡುಪಿ ಸೀನಿಯರ್ ಸಿಟಿಜನ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಲ್ಜೈಮರ್ಸ್ ದಿನ ಅಂಗವಾಗಿ `ಅರಿವು ಮತ್ತು ತಡೆಗಟ್ಟುವಿಕೆ' ಆಶಯದೊಂದಿಗೆ ವಿಶೇಷ ಜಾಗೃತಿ ಕಾರ್ಯಕ್ರಮ ಮತ್ತು ಮಾಹಿತಿ ಕಾರ್ಯಾಗಾರ ಐಎಂಎ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಗಿರಿಜಾ ರಾವ್ ಮಣಿಪಾಲ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್, ಉಡುಪಿ ಸೀನಿಯರ್ ಸಿಟಿಜನ್ ಅಸೋಸಿಯೇಷನ್ ಅಧ್ಯಕ್ಷ ಮುರಳೀಧರ್ ಹಾಗೂ ಮಣಿಪಾಲ ರೋಟರಿ ಕಾರ್ಯದರ್ಶಿ ನಹುಶ ಶೆಟ್ಟಿ ಆಗಮಿಸಿದ್ದರು.


ಡಾ.ಎ.ವಿ. ಬಾಳಿಗಾ ಚಾರಿಟೀಸ್ ಹಾಗೂ ಕಮಲ ಎ. ಬಾಳಿಗಾ ಚಾರಿಟೆಬಲ್ ಟ್ರಸ್ಟ್  ಟ್ರಸ್ಟಿ ಡಾ.ಆರ್.ವಿ. ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು.


ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.


ಮನಶಾಸ್ತ್ರಜ್ಞ ವಿಶ್ವೇಶ್ವರ ಹೆಗಡೆ ಸ್ವಾಗತಿಸಿದರು. ಆಪ್ತ ಸಮಾಲೋಚಕರಾದ ದೀಪಶ್ರೀ ನಿರೂಪಿಸಿ, ಅಕ್ಷಯ್ ವಂದಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಹಾಗೂ ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ ಮತ್ತು ಡಾ. ದೀಪಕ್ ಮಲ್ಯ, ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ ಅವರು ಅಲ್ಜೈಮರ್ಸ್ ಕಾಯಿಲೆ ಕುರಿತು ಉಪನ್ಯಾಸ ನೀಡಿದರು.