ಸಿ.ಎ. ಫೌಂಡೇಶನ್ ಫಲಿತಾಂಶ: ಜ್ಞಾನಸುಧಾದ 12 ವಿದ್ಯಾರ್ಥಿಗಳು ತೇರ್ಗಡೆ

ಲೋಕಬಂಧು ನ್ಯೂಸ್ | ಕಾರ್ಕಳ, ಜು.3
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ರಾಷ್ಟ್ರ ಮಟ್ಟದಲ್ಲಿ ನಡೆಸುವ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಜ್ಞಾನಸುಧಾದ ವಾಣಿಜ್ಯ ವಿಭಾಗದ 12 ಮಂದಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ಶ್ರೀಕರ್ 400ರಲ್ಲಿ 316 ಅಂಕ ಪಡೆಯುವ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.


ವಿದ್ಯಾರ್ಥಿಗಳಾದ ಸಕ್ಷಮ್ ಕದಂಬ (272), ಚಾನ್ವಿ (261), ಲತೇಶ್ ಕೆ. ಮೊಯ್ಲಿ (241), ಶ್ರೇಯಸ್ ಶೆಣೈ (239), ಮನ್ವಿಶ್ ರಾವ್ (228), ಸಾನ್ವಿ ದಿನೇಶ್ ಶೆಟ್ಟಿ (225), ರಕ್ಷಿತ್ ಶೆಟ್ಟಿ (223), ವೈಶಾಲಿ (217), ಆದಿತ್ಯ ಶೆಟ್ಟಿಗಾರ್ (214) ಹಾಗೂ ಪ್ರತೀಕ್ಷಾ ವಸಂತ್ ಮತ್ತು ಸನ್ನಿಧಿ (200) ಅಂಕ ಪಡೆದಿದ್ದಾರೆ.


ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.