ಜನಾರ್ದನ ಪೂಜಾರಿ ನಿವಾಸಕ್ಕೆ ಸಿಎಂ‌ ಭೇಟಿ

ಲೋಕಬಂಧು ನ್ಯೂಸ್ ಬಂಟ್ವಾಳ, ಸೆ.18
ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಬಿ.ಜನಾರ್ದನ ಪೂಜಾರಿ ನಿವಾಸಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ರಾತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದರು.ಕಳೆದ ಫೆಬ್ರವರಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದ ವೇಳೆಯೂ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದ ವೇಳೆ ಜನಾರ್ದನ ಪೂಜಾರಿ ಅವರು ಉತ್ತಮ ಕೆಲಸ ಮಾಡಿ ನಾಡಿಗೆ ಕೀರ್ತಿ ತರುವಂತೆ ಹಾರೈಸಿದ್ದರು.ಈ ಸಂದರ್ಭದಲ್ಲಿ ಪೂಜಾರಿಯವರ ಮನೆಯ ಸದಸ್ಯರು,  ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಡಿಸಿಸಿ ಅಧ್ಯಕ್ಷ ಆರ್.ಪದ್ಮರಾಜ್, ಪಕ್ಷ ಪ್ರಮುಖರಾದ ಮಿಥುನ್ ರೈ, ಇನಾಯತ್ ಅಲಿ, ಪಿಯೂಸ್ ಎಲ್. ರೋಡ್ರಿಗಸ್, ಬೇಬಿ ಕುಂದರ್ ಮೊದಲಾದವರಿದ್ದರು.