ಮೋದಿ ಹುಟ್ಟುಹಬ್ಬ: ಹಾಲುಪಾಯಸ ವಿತರಣೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.17
ಪ್ರಧಾನ ಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರ 76ನೇ ಹುಟ್ಟುಹಬ್ಬ ಅಂಗವಾಗಿ ಗುರುವಾರ ಕಡಿಯಾಳಿ ಹೋಟೆಲ್ ಶ್ರೀನಿವಾಸ್ ಮಾಲಕ ನರಸಿಂಹ ಕಿಣಿ ನೇತೃತ್ವದಲ್ಲಿ ನಾಗರಿಕರಿಗೆ ಉಚಿತ ಹಾಲುಪಾಯಸ ವಿತರಿಸಲಾಯಿತು.
ಕಾರ್ಯಕ್ರಮವನ್ನು ಯುವ ಉದ್ಯಮಿ ಜಯಂತ ಕುಂದರ್ ನೆರವೇರಿಸಿದರು.


ಕಡಿಯಾಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಕುಲಾಲ್ ಕಡಿಯಾಳಿ, ಉದ್ಯಮಿ ಎಂ.ವಲ್ಲಭ ಭಟ್, ಉಡುಪಿ ನಗರಸಭೆ ಮಾಜಿ ಸದಸ್ಯ ಗಿರೀಶ್ ಅಂಚನ್, ಸಾಮಾಜಿಕ ಕಾರ್ಯಕರ್ತರಾದ ಸುವರ್ಧನ ನಾಯಕ್, ಮಂಜುನಾಥ್ ಹೆಬ್ಬಾರ್, ಸಂತೋಷ್ ಕಿಣಿ, ಸಂಧ್ಯಾ ಪ್ರಭು, ಶೋಭಾ ಕಾಮತ್, ಸಂದೀಪ್ ಸನಿಲ್, ಸತ್ಯಸಂಗಮ್ ಉಮೇಶ್ ಆಚಾರ್ಯ ಮೊದಲಾದವರಿದ್ದರು.


ಆಸರೆ ಟ್ರಸ್ಟ್‌ನ ಕಡಿಯಾಳಿ ರಾಘವೇಂದ್ರ ಕಿಣಿ ಅವರು ಮೋದಿ ಬಗ್ಗೆ ಮಾತನಾಡಿದರು.


ಕಳೆದ ಹಲವಾರು ವರ್ಷಗಳಿಂದ ಕಿಣಿ ಅವರು ಮೋದಿ ಹುಟ್ಟುಹಬ್ಬ ಅಂಗವಾಗಿ ಪಾಯಸ ವಿತರಿಸುತ್ತಿದ್ದಾರೆ.