ಕೊಡವೂರು ದೇವಳದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ನೇಮಕ

ಲೋಕಬಂಧು ನ್ಯೂಸ್ ಮಲ್ಪೆ, ಸೆ.14
ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ಅವರನ್ನು ಆಯ್ಕೆ ಮಾಡಿ ದೇವಳದ ವ್ಯವಸ್ಥಾಪನ ಸಮಿತಿ ನೇಮಿಸಿದ್ದಾರೆ.ಈ ಹಿಂದಿದ್ದ ಕೆ.ಗೋವಿಂದ ಐತಾಳ್ ಅವರು ಸ್ವಯಂ ನಿವೃತ್ತಿ  ಘೋಷಿಸಿದ ಹಿನ್ನೆಲೆಯಲ್ಲಿ ಆ ಹುದ್ದೆಗೆ ಜನಾರ್ದನ ಕೊಡವೂರು ಅವರನ್ನು ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.