ಗಣೇಶೋತ್ಸವಗಳಿಂದ ಧಾರ್ಮಿಕ ಜಾಗೃತಿ, ಸಮಾಜಸೇವೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.19
ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ‌ ಚಳವಳಿಯ ಕಿಚ್ಚು ಹೆಚ್ಚಿಸಲು, ಜನರು ತೊಡಗಲು ಜಾರಿಗೆ ತಂದ ಸಾರ್ವಜನಿಕ ಗಣೇಶೋತ್ಸವ ಸ್ವಾತಂತ್ರ್ಯಾ ನಂತರ ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಜಾಗೃತಿಗೆ ಪೂರಕವಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನರ್ಪಾಡಿ ಕಿನ್ನಿಮೂಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಮಂಗಳವಾರ ನಡೆದ  ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಪ್ರಸಾದ್ ನೇತ್ರಾಲಯದ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು‌ ಮಾತನಾಡಿ ಸಮಾಜದ ಬಡ, ನೊಂದ ಜನರ ಕಣ್ಣೀರು ಒರೆಸುವ ಕೃಷ್ಣಮೂರ್ತಿ ಆಚಾರ್ಯ ಉಡುಪಿಯ ಆಸ್ತಿ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಗಣೇಶೋತ್ಸವದಲ್ಲಿ ಜನರು ಭಾಗಿಯಾಗಿದ್ದು ಐಕ್ಯತೆ, ಸಾಮರಸ್ಯದ ವೇದಿಕೆಯಾಗಿದೆ.


ಕಣ್ಣಿನ ಚಿಕಿತ್ಸೆ ನಿಟ್ಟಿನಲ್ಲಿ ಕನ್ನರ್ಪಾಡಿ ಕಿನ್ನಿಮೂಲ್ಕಿ ಪರಿಸರವನ್ನು ದತ್ತು ಪಡೆಯುವುದಾಗಿ ಡಾ.ಕೃಷ್ಣಪ್ರಸಾದ್ ಘೋಷಿಸಿದರು.


ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ್ ಶೇರಿಗಾರ್, ಕನ್ನರ್ಪಾಡಿ ದೇವಳದ ಸರದಿ ಅರ್ಚಕ ವಿಷ್ಣುಮೂರ್ತಿ ಭಟ್, ಸಮಿತಿ ಗೌರವಾಧ್ಯಕ್ಷ ಹಾಗೂ ವಕೀಲ ಸಂಜೀವ ಎ., ಸಿವಿಲ್ ಎಂಜಿನಿಯರ್ ಶೈಲೇಶ ರಾವ್, ಶ್ರೀಕಾಂತ್ ರಾವ್, ಡಾ.ದೀಪಾ, ರವಿ ಪ್ರಕಾಶ್ ಶೆಟ್ಟಿಗಾರ್, ಸುರೇಶ್ ಶೆಟ್ಟಿ, ಅಶ್ವಿನಿ ರಂಗ ಕರ್ಕೇರ, ಚರಣ್ ಶೆಟ್ಟಿ ಕನ್ನರ್ಪಾಡಿ, ರಮೇಶ್ ಶೆಟ್ಟಿಗಾರ್, ಉಮೇಶ್ ಶೆಟ್ಟಿಗಾರ್ ನಾಯರ್ ಕೆರೆ, ಸತೀಶ್ ಬೀಡು ನಾಯರ್ ಕೆರೆ, ಪ್ರವೀಣ್ ಭಂಡಾರಿ ಬಲಾಯಿಪಾದೆ, ಅಶೋಕ್ ಆಚಾರ್ಯ ಕಪ್ಪೆಟ್ಟು ಸತೀಶ್ ಶೇರಿಗಾರ್ ಕಿನ್ನಿಮೂಲ್ಕಿ, ನವೀನ್ ಶೆಟ್ಟಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.


ಮೇಧಿನಿ ಭಟ್ ಪ್ರಾರ್ಥಿಸಿದರು. ಮುರಳಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ. ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.