ಕಟೀಲಿನಲ್ಲಿ ಏಕಾಹ ಭಜನೆ, ಮಂಗಲೋತ್ಸವ

ಲೋಕಬಂಧು ನ್ಯೂಸ್ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ಕಾದಶಿ ನ.21ರಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ಮರುದಿನ ಬೆಳಿಗ್ಗೆ 6 ಗಂಟೆಯ ವರೆಗೆ ಏಕಾಹ ಭಜನೆ ನಡೆಯಲಿದೆ.ನ.8ರಂದು ದೀಪಾವಳಿ ದಿನದಿಂದ ಆರಂಭವಾಗಿರುವ ನಾಮಸಂಕೀರ್ತನೋಪಾಸನೆ ಡಿ.1ರಂದು ಭಜನಾ ಮಂಗಲೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.