ಲೋಕಬಂಧು ನ್ಯೂಸ್ | ಉಡುಪಿ
ಇಲ್ಲಿನ 76 ಬಡಗಬೆಟ್ಟು ಬೈಲೂರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.11ರಿಂದ 21ರ ವರೆಗೆ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಆಶ್ವಯುಜ ಶುದ್ಧ ಪ್ರತಿಪದೆ ಅ.11 ರವಿವಾರದಿಂದ ಅ.21 ಬುಧವಾರ ವಿಜಯದಶಮಿ ಪರ್ಯಂತ ಶಿಲಾಶಿಲಾ ತಂತ್ರಿಗಳಾದ ವಿದ್ವಾನ್ ವೇದಮೂರ್ತಿ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಮಹೋತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಮೋಹನ್ ಮುದ್ದಣ್ಣ ಶೆಟ್ಟಿ, ಕಾರ್ಯದರ್ಶಿ ಬಿ.ನಾರಾಯಣ್ ದಾಸ್ ಉಡುಪ, ಪ್ರಧಾನ ಅರ್ಚಕ ಬಿ.ವಾಸುದೇವ ಭಟ್ ಮತ್ತು ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ ತಿಳಿಸಿದ್ದಾರೆ.
ಅ.11ರಂದು ಬೆಳಿಗ್ಗೆ ಗಂಟೆ 7.30ರಿಂದ 8.30ರೊಳಗೆ ಕದಿರು ಕಟ್ಟುವುದು, ನವಕ ಕಲಶಾಭಿಷೇಕ. ಅ.13ರಂದು ಬೆಳಿಗ್ಗೆ 11 ಗಂಟೆಗೆ ನಾಗದರ್ಶನ, ಅ.15ರಂದು ಸಾನಿಧ್ಯದ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಅ.21ರಂದು ಪಂಚವಿಂಶತಿ ಕಲಶ ಪ್ರಧಾನ ಹೋಮ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂತ್ರಾಕ್ಷತೆ ನಡೆಯಲಿದೆ.
ಅ.15ರಂದು ಲಲಿತಾ ಪಂಚಮಿಯಂದು ಬೈಲೂರು ಗ್ರಾಮದ ಭಕ್ತಾದಿಗಳಿಂದ ಚಂಡಿಕಾ ಯಾಗ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಆ ಬಗ್ಗೆ ರೂ. 500 ನೀಡಿ ಸೇವೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಪ್ರಕಟಣೆ ತಿಳಿಸಿದೆ.
