ನ.16: ಗುಂಡ್ಯಡ್ಕ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ರಥ ಸಮರ್ಪಣೆ

ಲೋಕಬಂಧು ನ್ಯೂಸ್ | ಮೂಡುಬಿದಿರೆ
ಕಲ್ಲಮುಂಡ್ಕೂರು ಸಮೀಪದ ಬಾನಂಗಡಿ ಶ್ರೀನಿವಾಸಪುರ ಗುಂಡ್ಯಡ್ಕ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದಲ್ಲಿ ಮಂಗಳೂರು ಶ್ರೀ ರಾಧಾಕೃಷ್ಣ ದೇವಸ್ಥಾನದ ಬಾಳಂ ಭಟ್ ಮನೆತನದ ದಿ.ಡಾ.ನಾರಾಯಣ ಭಟ್ ಪರಾಡ್ಕರ್ ಮತ್ತು ಪದ್ಮಾವತಿ ಅವರ ಮಕ್ಕಳಾದ ಎಂ.ಗಿರಿಧರ ಭಟ್ ಪರಾಡ್ಕರ್ ಹಾಗೂ ರಾಧಾ ಅವರು ನ.16ರಂದು ನೂತನ ರಥ ಸಮರ್ಪಣೆ ಮಾಡಲಿದ್ದಾರೆ.
ಅಂದು ಬೆಳಿಗ್ಗೆ ರಥ ಶುದ್ಧಿ, ಗಣಪತಿ ಹೋಮ, ಲಕ್ಷ್ಮೀನಾರಾಯಣ ಪ್ರಧಾನ ಹೋಮ ಬಳಿಕ ರಥ ಸಮರ್ಪಣೆ, ಶ್ರೀದೇವರ ರಥಾರೋಹಣ, ರಥೋತ್ಸವ ನಡೆಯಲಿದೆ.


ಭಜನಾ ಸಪ್ತಾಹ
ನ.18ರಿಂದ ಶ್ರೀ ವಿಠೋಬ ಭಜನಾ ಮಂಡಳಿಯ 80ನೇ ಭಜನಾ ಸಪ್ತಾಹ ಪ್ರಾರಂಭಗೊಳ್ಳಲಿದ್ದು, ನ.24ರಂದು ಮಂಗಲೋತ್ಸವ ನಡೆಯಲಿದೆ.


ಅಂದು ಸಂಜೆ ದೀಪಾರಾಧನೆ, ಪಲ್ಲಕಿ ಸೇವೆ, ರಥೋತ್ಸವ, ಅಷ್ಟಾವಧಾನ ಸೇವೆ, ರಾತ್ರಿ 9ರಿಂದ ಮರುದಿನ ಸೂರ್ಯೋದಯದ ತನಕ ಭಜನೆ, ಮಹಾಪೂಜೆ, ಮಂಗಲೋತ್ಸವ ಜರಗಲಿದೆ ಎಂದು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಪರಾಡ್ಕರ್ ತಿಳಿಸಿದ್ದಾರೆ.