ಕೊಡಿಹಬ್ಬ ಮರಳುಚಿತ್ರ

ಲೋಕಬಂಧು ನ್ಯೂಸ್ | ಕುಂದಾಪುರ
ಇತಿಹಾಸ ಪ್ರಸಿದ್ಧ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ‌ ದೇವರ ರಥೋತ್ಸವ (ಕೊಡಿಹಬ್ಬ)ದ ಪ್ರಯುಕ್ತ ಕೋಟೇಶ್ವರ ಹಳೆಅಳಿವೆಯ ಕಡಲ ಕಿನಾರೆಯಲ್ಲಿ ಉಡುಪಿ ಸ್ಯಾಂಡ್ ಹಾರ್ಟ್ ಕಲಾತಂಡ ರಚಿಸಿದ ಮರಳುಚಿತ್ರ ಕಲಾಸಕ್ತರನ್ನು ಆಕರ್ಷಿಸುತ್ತಿದೆ.
ಕೋಟಿಲಿಂಗೇಶ್ವರ ಮೂಲ ವಿಗ್ರಹದ ಮಾದರಿಯಲ್ಲಿ ರಚಿತವಾದ ದೇವರ ಶಿಲ್ಪದೊಂದಿಗೆ ಕಬ್ಬಿನ ಕೊಡಿಯೊಂದಿಗೆ ಧ್ವಜಪುರದ ಇತಿಹಾಸ ಮತ್ತು ಶಾಸನವನ್ನು ಮರುಕಳಿಸುವ ಶಿಲೆಯ ದೃಶ್ಯದೊಂದಿಗೆ `ಕೊಡಿಹಬ್ಬ'ಕ್ಕೆ ಸ್ವಾಗತ ಕೋರುವ ಕಲಾಕೃತಿಯನ್ನು ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ಸಂತೋಷ್ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ರಚಿಸಿದ್ದಾರೆ.