ರಾಜಾಂಗಣದಲ್ಲಿ‌‌ ಬೃಹತ್ ಫ್ಯಾನ್ ಅಳವಡಿಕೆ

ಲೋಕಬಂಧು ನ್ಯೂಸ್ | ಉಡುಪಿ
ನಿರಂತರವಾಗಿ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಕೃಷ್ಣಮಠದ ರಾಜಾಂಗಣದಲ್ಲಿ ಸಭಾಸದರು ಮತ್ತು ಪ್ರೇಕ್ಷಕರ ಅಳವಡಿಸಲಾದ ಬೃಹತ್ ಫ್ಯಾನ್'ನ್ನು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಶಾಂತಾ ಎಲೆಕ್ಟ್ರಿಕಲ್ಸ್'ನವರು‌ ಕೊಡುಗೆಯಾಗಿ ನೀಡಿದ್ದು, ಅವರ ಈ ಕೊಡುಗೆ ನಿಜಾರ್ಥದ ಸಾರ್ಥಕತೆ ಪಡೆದಿದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಶಾಂತಾ ಎಲೆಕ್ಟ್ರಿಕಲ್ಸ್ ಮುಖ್ಯಸ್ಥ ಶ್ರೀಪತಿ ಭಟ್ ಉಚ್ಚಿಲ, ಶ್ರೀಧರ ಭಟ್ ಉಚ್ಚಿಲ, ಮಠದ ಅಧಿಕಾರಿಗಳಾದ ವೆಂಕಟರಮಣ ಮುಚ್ಚಿಂತಾಯ, ರಾಮಮೂರ್ತಿ ಆಚಾರ್ಯ ಮೊದಲಾದವರಿದ್ದರು.