ನ.28: ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಶುಭಾರಂಭ

ಲೋಕಬಂಧು ನ್ಯೂಸ್ | ಉಡುಪಿ
ನಿಸರ್ಗ ರಮಣೀಯ ಕಡಲ ತೀರದ ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಿನಲ್ಲಿ ಕಂಗೊಳಿಸುತ್ತಿರುವ ಮಲ್ಪೆ ಕಡಲ ಕಿನಾರೆ ಸನಿಹದ ಮಲ್ಪೆ- ಪಡುಕರೆ ಸಮೀಪದ ಶಾಂತಿನಗರದ ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತ ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆ ಕೋಸ್ಟಲ್‌ವುಡ್ ರೆಸಾರ್ಟ್ಸ್ ಉಡುಪಿ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ನ.28ರಂದು ಶುಭಾರಂಭಗೊಳ್ಳಲಿದೆ.
ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್, ಕಡಲು- ಹಿನ್ನೀರು ಸಂಗಮವಾಗುವ ರಮಣೀಯ ಸ್ಥಳವನ್ನು ಕಣ್ತುಂಬಿಕೊಳ್ಳುವುದಕ್ಕೆ ಇದೊಂದು ಸುವರ್ಣಾವಕಾಶ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಕಲ ಸೌಲಭ್ಯಗಳೊಂದಿಗೆ ಈ ರೆಸಾರ್ಟ್ ನಿರ್ಮಿಸಲಾಗಿದೆ.
ನ.28ರಂದು ಬೆಳಿಗ್ಗೆ 11.30ಕ್ಕೆ ಮಲ್ಪೆ ಪಡುಕರೆ ಶಾಂತಿನಗರದಲ್ಲಿ ರೆಸಾರ್ಟ್ ಲೋಕಾರ್ಪಣೆಯಾಗಲಿದ್ದು ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ. ಚಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ, ಉಪಸಭಾಪತಿ ಮಾಂಕಾಳ ವೈದ್ಯ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್,  ಶಾಸಕರಾದ ಯಶಪಾಲ್ ಎ. ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಐವನ್ ಡಿ'ಸೋಜ, ಮಾಜಿ ಶಾಸಕ ಕೆ.ರಘುಪತಿ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾಡೋಜ ಡಾ.ಜಿ. ಶಂಕರ್ ತಿಳಿಸಿದ್ದಾರೆ.
ಲಕ್ಸುರಿ ರೆಸಾರ್ಟ್
ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 400ಕ್ಕೂ ಅಧಿಕ ಮಂದಿ ಆಸೀನರಾಗಲು ಬೇಕಾದ ವ್ಯವಸ್ಥೆಯುಳ್ಳ ಔರ್‌ಲಿಯಾ ಬ್ಯಾಂಕ್ವೆಟ್ ಹಾಲ್, ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀ ಪ್ರಸನ್ನ ಗಣಪತಿ ಮಂದಿರ, ಮೆಹಂದಿ- ಹಳದಿ, ಡೆಸ್ಟಿನೇಶನ್ ಮ್ಯಾರೇಜ್, ರಿಸೆಪ್ಶನ್ ಸಹಿತ ಇತರ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಆಕರ್ಷಣೀಯ ಹಚ್ಚಹಸುರಿನ ಸಿರೆನಾ ಗ್ರೀನ್ಸ್ ಓಪನ್ ಗಾರ್ಡನ್, ಸುಸಜ್ಜಿತ ಸುಮಾರು 55 ಹವಾನಿಯಂತ್ರಿತ ಡೀಲಕ್ಸ್ ರೂಮ್‌ಗಳನ್ನು ಹೊಂದಿದೆ.
ಫ್ಯಾಮಿಲಿ ರೆಸ್ಟೋರೆಂಟ್ ಜನರ ಅನುಕೂಲಕ್ಕೆ ತಕ್ಕಂತೆ ಸ್ಪೇಸ್ ವೇವ್ ಲಾಂಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಮಲ್ಟಿ ಕ್ಯುಸಿನ್ ಬಾರ್ ಮತ್ತು ವೆಜ್ ರೆಸ್ಟೋರೆಂಟ್, ಆಕರ್ಷಕ ಕೋಸ್ಟಾ ಗ್ರಾಂಡೆ ಕಾಫಿ ಶಾಪ್, 400ಕ್ಕೂ ಅಧಿಕ ಕಾರು/ ದ್ವಿಚಕ್ರ ವಾಹನಗಳಿಗಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ವಸ್ಪಾ, ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಮಕ್ಕಳ ಆಟದ ಪಾರ್ಕ್‌ನ ವ್ಯವಸ್ಥೆ ಹೊಂದಿದೆ.


ಕಾರ್ಪೋರೇಟ್ ಸಂಸ್ಥೆಗಳ ಸಭೆ, ಸಮಾರಂಭಗಳಿಗೆ ಅನುಕೂಲವಾಗುವ ಬೋರ್ಡ್ ರೂಮ್/ಕಾನ್ಫರೆನ್ಸ್ ಹಾಲ್, ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಗೆ ವಿಶಾಲವಾದ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಇದೆ.


ಉದ್ಘಾಟನೆಗೆ ತಾರೆಯರ ಮೆರಗು
ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಚಲನಚಿತ್ರ ನಟ- ನಟಿಯರು ಆಗಮಿಸಲಿದ್ದು, ವಿಶೇಷ ಆಕರ್ಷಣೆಯಾಗಿ ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಖ್ಯಾತಿಯ ಕನ್ನಡ ಸಿನೆಮಾ 'ಪ್ರೇಮದ ಊರಲಿ' ನಾಯಕ ಶ್ರೀರಾಮ್, ನಾಯಕಿ ತಪಸ್ವಿನಿ ಪೂಣಚ್ಚ ಭಾಗಿಯಾಗಿ ತಾರಾ ಮೆರಗು ನೀಡಲಿದ್ದಾರೆ.