ಲೋಕಬಂಧು ನ್ಯೂಸ್ ಎರ್ನಾಕುಲಂ
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮ
ಅವರು ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಪವಿತ್ರ ಜನ್ಮಸ್ಥಳವಾದ ಕೇರಳದ ಕಾಲಟಿಯಲ್ಲಿರುವ ಶ್ರೀ ಆದಿಶಂಕರ ಜನ್ಮಭೂಮಿ ಕ್ಷೇತ್ರ ಹಾಗೂ ಶ್ರೀ ಶೃಂಗೇರಿ ಶಂಕರ ಮಠಕ್ಕೆ ಶುಕ್ರವಾರ ಭೇಟಿ ನೀಡಿದರು.ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಮುರಳಿ ಅವರು ರಾಷ್ಟ್ರಪತಿ ಅವರನ್ನು ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ಕೋರಿದರು.ಬಳಿಕ ರಾಷ್ಟ್ರಪತಿ ಅವರು ಮಠದ ಆವರಣದಲ್ಲಿರುವ ವಿವಿಧ ಸನ್ನಿಧಿಗಳಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜನ್ಮಸ್ಥಳವಾಗಿರುವ ಕಾಲಟಿಯ ಈ ಪುಣ್ಯಕ್ಷೇತ್ರ ಭಾರತೀಯ ಆಧ್ಯಾತ್ಮಿಕ ಪರಂಪರೆ ಹಾಗೂ ಅದ್ವೈತ ವೇದಾಂತದ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡಿದೆ.