ಸಚಿತ್ರ ಅಂಚೆ ಚೀಟಿ ಬಿಡುಗಡೆ

ಲೋಕಬಂಧು ನ್ಯೂಸ್ ಉಜಿರೆ
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 79ನನೇ ಜನ್ಮದಿನಾಚರಣೆ ಸವಿನೆನಪಿಗಾಗಿ 'ವಂದೇ ಭಾರತಮ್' ಪರಿಕಲ್ಪನೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್‌ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ವೀರ ವನಿತೆಯರ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಸಚಿತ್ರ ಅಂಚೆ ಚೀಟಿಗಳನ್ನು ಹೆಗ್ಗಡೆಯವರ ನಿವಾಸ‌ (ಬೀಡು)ದಲ್ಲಿ ಬುಧವಾರ‌  ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.ಬಿಡುಗಡೆಯಾದ ಅಂಚೆ ಚೀಟಿಗಳು
ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ ಅಕ್ಕಾದೇವಿ, ಕಾಳಲಾದೇವಿ, ಕಂತಿ, ಚೌಟರರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ ಮತ್ತು ಚಂದನಬಾಲೆ.


ವಂದೇ ಮಾತರಂ ಗೀತೆಯ 150 ವಷ೯ಗಳ ಸ್ಮರಣಾರ್ಥ ಹಾಗೂ 2026ರ ಜಿನಸಮ್ಮಿಲನ ನಡೆಯುವ ಸಮ್ಮೇದಶಿಖರ್ಜಿ ವಿಷಯಗಳನ್ನೊಳಗೊಂಡ ಅಂಚೆಪತ್ರಗಳೂ ಸೇರಿದಂತೆ ಒಟ್ಟು 20 ಅಂಚೆಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.


ಧಮಾ೯ಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಚಿತ್ರ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿ, ಅಂಚೆ ಇಲಾಖೆ ಮತ್ತು ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.


ಅಂಚೆ ಇಲಾಖೆ ನಿರ್ದೇಶಕಿ ಶ್ರೀಹಷ೯ ಎನ್‌. ಮತ್ತು ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ ಉಪಸ್ಥಿತರಿದ್ದರು.


ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್‌ ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್‌ ಮತ್ತು ಆಡಳಿತ ನಿರ್ದೇಶಕ ಬಿ.ಪಿ.ಸಂಪತ್‌ಕುಮಾರ್‌ ಉಪಸ್ಥಿತರಿದ್ದರು.