ಲೋಕಬಂಧು ನ್ಯೂಸ್ ಕಾಪು
ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರ ಬಗ್ಗೆ 'ಆಶಾ ಕಾರ್ಯಕರ್ತೆಯರು ಇದ್ದರೂ, ಇಲ್ಲದಿದ್ದರೂ ಕೆಲಸ ನಡೆಯುತ್ತದೆ' ಎಂಬ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ಖಂಡನೀಯ ಎಂದು ಶಾಸಕ ಗುರ್ಮೆ ಸುರೇಶ ಶೆಟ್ಟಿ ತಿಳಿಸಿದ್ದಾರೆ.ಕಳೆದ ಸುಮಾರು ಹತ್ತು ದಿನಗಳಿಂದ ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ, ಮಳೆ- ಚಳಿಯನ್ನು ಲೆಕ್ಕಿಸದೆ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣಿದ್ದೂ ಕುರುಡು, ಕಿವಿ ಇದ್ದೂ ಕಿವುಡರಂತಾಗಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಮನೆ ಮನೆಗಳಿಗೆ ತೆರಳಿ ಜನರ ಆರೋಗ್ಯದ ಕಾಳಜಿ ವಹಿಸುವ ಜೊತೆಗೆ ಎಸ್ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಮರೆತ ಆರೋಗ್ಯ ಸಚಿವರು ಅವರ ಬಗ್ಗೆ ಆಡಿದ ಹಗುರವಾದ ಹೇಳಿಕೆ ಸರಿಯಲ್ಲ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳದ ಭರವಸೆ ನೀಡಿದ್ದ ಸರ್ಕಾರಕ್ಕೆ ಅವರ ಬಗ್ಗೆ ಇದ್ದ ಕಾಳಜಿ ಈಗೇಕೆ ಇಲ್ಲ ಎಂದು ಶಾಸಕ ಗುರ್ಮೆ ಪ್ರಶ್ನಿಸಿದ್ದಾರೆ.