ವಿಮಾ ಪಿಂಚಣಿದಾರರಿದ ಮತ ಪ್ರದರ್ಶನ

ಲೋಕಬಂಧು ನ್ಯೂಸ್ ಉಡುಪಿ
ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಮತ್ತು ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಶನ್ ಸದಸ್ಯರು ಎಲ್ಐಸಿ ವಿಭಾಗೀಯ ಕಚೇರಿಯ ಮುಖ್ಯ ದ್ವಾರದ ಎದುರು ಜಂಟಿಯಾಗಿ ಮತ ಪ್ರದರ್ಶನ ನಡೆಸಿ, ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಎಲ್ಐಸಿ ಹಿರಿಯ ವಿಭಾಗಾಧಿಕಾರಿ ಮೂಲಕ ನಿಗಮದ ಅಧ್ಯಕ್ಷರಿಗೆ ಸಲ್ಲಿಸಿದರು.1997ರ ಆಗಸ್ಟ್'ಗಿಂತ ಮೊದಲಿನ ಪಿಂಚಣಿದಾರರಿಗೆ ಏಕರೂಪದ ಡಿ.ಎ ತಟಸ್ಥೀಕರಣ, 1986ರ ಪೂರ್ವದಲ್ಲಿ ನಿವೃತ್ತರಾದವರಿಗೆ ಎಕ್ಸ್-ಗ್ರೇಷಿಯಾ ಪಾವತಿಯಲ್ಲಿ ಹೆಚ್ಚಳ, ನಿವೃತ್ತರಿಗೆ ನಗದು ವೈದ್ಯಕೀಯ ಭತ್ಯೆ. ಪ್ರತೀ ವರ್ಷವೂ ಆರೋಗ್ಯ ತಪಾಸಣೆಯ ವೆಚ್ಚ ನೀಡುವ ಸೌಲಭ್ಯ ಮೆಡಿಕ್ಲೈಮ್ ಯೋಜನೆಯಲ್ಲಿ ಸುಧಾರಣೆ ಮತ್ತು ಮೆಡಿಕ್ಲೈಮ್ ಯೋಜನೆ ಪ್ರೀಮಿಯಂ ಮೇಲಿನ ಜಿಎಸ್‌ಟಿ ದರ ಕಡಿತಗೊಳಿಸುವುದು ಹಾಗೂ 80 ವರ್ಷ ಪೂರೈಸಿದ ಪಿಂಚಣಿದಾರರ ಮೂಲ ವೇತನ ಹೆಚ್ಚಳ ಇತ್ಯಾದಿ ಬೇಡಿಕೆಗಳನ್ನು ಸಲ್ಲಿಸಲಾಯಿತು.


ವಿಮಾ ನೌಕರರ ಸಂಘಟನೆಯ ಡೆರಿಕ್ ರೆಬೆಲ್ಲೋ ಮತ್ತು ನಿವೃತ್ತ ವಿಮಾ ನೌಕರರ ಫೆಡರೇಶನ್ ಕಾರ್ಯದರ್ಶಿ ಎಚ್. ಶುಭಚಂದ್ರ ಹತ್ವಾರ್ ಮಾತನಾಡಿದರು.