ನಿಷೇಧಾಜ್ಞೆ ನಡುವೆ ಕಂಬಳ ಶಂಕುಸ್ಥಾಪನೆ: ಶಾಸಕ ಗುರ್ಮೆ ಸಹಿತ 38 ಮಂದಿ ವಿರುದ್ಧ ಕೇಸು

ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲಾಡಳಿತ ವಿಧಿಸಿದ ನಿಷೇಧಾಜ್ಞೆಯ ನಡುವೆಯೂ ಮಣಿಪಾಲ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದಲ್ಲಿ ಕಂಬಳ ಕರೆ ಶಂಕುಸ್ಥಾಪನೆ ನೆರವೇರಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಹಲವರ ವಿರುದ್ಧ ಉಡುಪಿ ತಹಶೀಲ್ದಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.'ಉಡುಪಿ ಕಂಬಳ' ಸಮಿತಿ ಅಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಾಸಕರಾದ ಯಶಪಾಲ್ ಸುವರ್ಣ ಉಡುಪಿ, ಸುನಿಲ್ ಕುಮಾರ್ ಕಾರ್ಕಳ, ಕಿರಣ್ ಕುಮಾರ್ ಕೊಡ್ಗಿ ಕುಂದಾಪುರ, ಗುರುರಾಜ್ ಗಂಟಿಹೊಳೆ ಬೈಂದೂರು, ಹರೀಶ್ ಪೂಂಜಾ ಬೆಳ್ತಂಗಡಿ, ರಾಜೇಶ್ ನಾಯ್ಕ್ ಬಂಟ್ವಾಳ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಕಾಪು ಹಾಗೂ ಗೀತಾಂಜಲಿ ಸುವರ್ಣ ಕಟಪಾಡಿ, ನಂದಳಿಕೆ ಶ್ರೀಕಾಂತ ಭಟ್, ಶುಭಕರ ಶೆಟ್ಟಿ, ಸಂದೀಪ್ ಶೆಟ್ಟಿ, ಜಯಾನಂದ ಹೆಗ್ಡೆ ಬೈರಂಪಳ್ಳಿ, ವೀಣಾ ಶೆಟ್ಟಿ ಉಡುಪಿ, ಸಾಯಿಶ ಸುಧಾಕರ ಶೆಟ್ಟಿ ಪೆರ್ಡೂರು, ಬೆಳಪು ದೇವಿಪ್ರಸಾದ್‌ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಡುಪಿ, ಹರಿಕೃಷ್ಣ ಬಂಟ್ವಾಳ, ರವೀಂದ್ರ ಮಡಿವಾಳ್‌ ಕಾರ್ಕಳ, ಅಂತೋನಿ ಡಿ'ಸೋಜ ನಕ್ರೆ, ವಿಜಯ ಕುಮಾರ್ ಕಂಗಿನಮನೆ ಹೊಸ್ಮಾ‌ರು, ಶ್ಯಾಮಲಾ ಕುಂದರ್ ಹಿರಿಯಡ್ಕ, ಲೋಕೇಶ್ ಶೆಟ್ಟಿ ಕಾರ್ಕಳ, ಮೋಹನ ಭಟ್ ಹಿರಿಯಡ್ಕ, ದಿಲ್ಲೇಶ್ ಶೆಟ್ಟಿ ಕುಕ್ಕೆಹಳ್ಳಿ, ಶಾಂತಾರಾಮ ಶೆಟ್ಟಿ ರಾಜೀವನಗರ, ರವೀಂದ್ರ ನಾಯ್ಕ ಕುಕ್ಕುದಕಟ್ಟೆ, ಗೋಪಾಲಕೃಷ್ಣ ಮಟ್ಟು, ಸುಭಾಷ್ ಬಲ್ಲಾಳ್ ಕಟಪಾಡಿ, ಶಿವ ಪುನಾರ್ ಹಿರೇಬೆಟ್ಟು, ಮೋಹನ್ ಶೆಟ್ಟಿ ಕಬ್ಯಾಡಿ, ಕೃಷ್ಣ ಕುಲಾಲ್ ವರ್ವಾಡಿ ಸೇರಿದಂತೆ ಒಟ್ಟು 38 ಮಂದಿಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.