ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಮಾರ್ಚ್ 3ರಂದು ಚಂದ್ರ ಗ್ರಹಣದಂದು ಶ್ರೀಕೃಷ್ಣ ದರ್ಶನ ಅಬಾಧಿತ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯ ಕುಮಾರ ಸರಳತ್ತಾಯ ತಿಳಿಸಿದ್ದಾರೆ.ಮಂಗಳವಾರ ಗ್ರಸ್ತೋದಯ ಚಂದ್ರಗ್ರಹಣ ನಡೆಯಲಿದ್ದು, ಸೂರ್ಯಾಸ್ತ ಸಮಯ 6:19ರಿಂದ 6:47ರ ವೇಳೆಗೆ ಕೇವಲ 8 ನಿಮಿಷ ಕಾಲ ಮಾತ್ರ ಗ್ರಹಣ ಗೋಚರ ಆಗಲಿದೆ.
ಕೃಷ್ಣಮಠದಲ್ಲಿ ಏಕಾದಶಿಯಂತೆ ಅನ್ನಪ್ರಸಾದ ವ್ಯವಸ್ಥೆ ಇಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟ ಇರುವುದಿಲ್ಲ. ಗ್ರಹಣ ಮೋಕ್ಷದ ತರುವಾಯ ರಾತ್ರಿ 7 ಗಂಟೆಗೆ ಸ್ನಾನ ಪೂರೈಸಿ, ರಾತ್ರಿ ಪೂಜೆ ನಡೆಯುತ್ತದೆ ಎಂದವರು ವಿವರಿಸಿದ್ದಾರೆ.