ಉಡುಪಿ: ಪರ್ಯಾಯ ಶೀರೂರು ಮಠ ನೇತೃತ್ವದಲ್ಲಿ ಕೃಷ್ಣಮಠದಲ್ಲಿ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ ಗ್ರಹಣ ಮೋಕ್ಷ ತರುವಾಯ ಶುದ್ಧೀಕರಣ ಪ್ರಕ್ರಿಯೆ ನಡೆಯಿತು.ಏಕಾದಶಿಯಂತೆ ಉಪವಾಸ ಆಚರಣೆ ನಡೆದಿದ್ದು, ಕೃಷ್ಣನಿಗೆ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ವಜ್ರ ಕವಚ ಅಲಂಕಾರ ಮಾಡಿ ಮಹಾಪೂಜೆ ನಡೆಸಿದರು. ಕೃಷ್ಣ ದರ್ಶನ ಅಭಾದಿತವಾಗಿತ್ತು.
ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗ್ರಹಣ ಮೋಕ್ಷ ಕಾಲದಲ್ಲಿ ಭಕ್ತರೊಂದಿಗೆ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಸ್ನಾನ ಮಾಡಿ ರಾತ್ರಿ ಪೂಜೆ ನೆರವೇರಿಸಿದರು