ಪಡುಬಿದ್ರಿ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದರುವ ಮೊಗವೀರ ಸಮಾಜದ ಕುಲಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ 30 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಾಣ ಪ್ರಯುಕ್ತ ಭಾನುವಾರ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ ನಡೆಯಿತು.
ಯೋಜನೆಯ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಬೈಕ್ ರ್ಯಾಲಿಯನ್ನು ಸ್ವಾಗತಿಸಿ, ಪುತ್ಥಳಿ ನಿರ್ಮಾಣ ಸ್ಥಳದಲ್ಲಿಯೇ ಗುರುಗಳ ಸ್ವರ್ಣ ಲೇಪಿತ ಪಾದುಕೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀಕ್ಷೇತ್ರದ ಜೀರ್ಣೋದ್ಧಾರದ ಸಂದರ್ಭ ನಡೆದ ಅಷ್ಟಮಂಗಲ ಪ್ರಶ್ನೆಯ ಸೂಚನೆ ಮೇರೆಗೆ ಶ್ರೀ ಗುರುಗಳ ಕಂಚಿನ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮಹಾಕಾರ್ಯಕ್ಕೆ ಸಮಾಜದ ಸರ್ವರ ಸಹಕಾರ ಅಗತ್ಯ ಎಂದರು.
ಪುತ್ಥಳಿ ಸ್ಥಾಪನೆ ಮೊಗವೀರ ಸಮುದಾಯದ ಐಕ್ಯತೆ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, ಗುರು ಪರಂಪರೆಯನ್ನು ಸಮಾಜದ ಮುಂದಿನ ಪೀಳಿಗೆಗೆ ತಿಳಿಸುವ ಆಶಯ ಹೊಂದಲಾಗಿದೆ. ಎಂದರು.
ಸಮಾಜಕ್ಕಾಗಿ ದುಡಿಯುವ ಜೊತೆಗೆ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸೋಣ ಎಂದವರು ಆಶಯ ವ್ಯಕ್ತಪಡಿಸಿದರು.
ದ್ವಿಚಕ್ರ ವಾಹನ ಜಾಥಾ
ಇದೇ ಸಂದರ್ಭದಲ್ಲಿ ಆಯೋಜಿಸಲಾದ ದ್ವಿಚಕ್ರ ವಾಹನ ಜಾಥಾ ದೇವಳದ ಉತ್ತರ ಭಾಗದ ಪಾಂಗಾಳ ಶ್ರೀ ಲಕ್ಷ್ಮೀಜನಾರ್ದನ ದೇವಳದಿಂದ ಮತ್ತು ದಕ್ಷಿಣದಿಂದ ಹೆಜಮಾಡಿ ಟೋಲ್ ಗೇಟ್ ಬಳಿಯಿಂದ ಆರಂಭವಾಗಿ ಉಚ್ಚಿಲ ದೇವಳದಲ್ಲಿ ಸಮಾಪನಗೊಂಡಿತು. ಸುಮಾರು 2 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಶಿಸ್ತುದ್ಧವಾಗಿ ಸಾರಿಗೆ ಸಂಚಾರ ನಿಯಮ ಪಾಲಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಸಮಾವೇಶ
ಕಾಸರಗೋಡು ಉಪ್ಪಳದಿಂದ ಬೈಂದೂರಿನ ಶೀರೂರು ವರೆಗಿನ ಮೊಗವೀರ ಬಂಧುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
1.5 ಕೋ. ಪಾದಕಾಣಿಕೆ ಸಲ್ಲಿಕೆ
ಆರಂಭದ ದಿನವೇ ಸುಮಾರು 1.5 ಕೋ. ರೂ. ಗುರುಪಾದಕಾಣಿಕೆ ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರವೂ ಅನುದಾನ ನೀಡಿದ್ದು ಮೊಗವೀರರ ಬಾರ್ಕೂರು ವಲಯ 35 ಲಕ್ಷ, ಮಂಗಳೂರು ವಲಯ 25 ಲಕ್ಷ, ಮಧ್ಯ ವಲಯ 25 ಲಕ್ಷ, ಉಡುಪಿ ವಲಯ 25 ಲಕ್ಷ, ಬಗ್ವಾಡಿ ವಲಯ 25 ಲಕ್ಷ, ವೇದಪ್ರಕಾಶ್ 10 ಲಕ್ಷ, ಪ್ರಸಾದ್ ರಾಜ್ ಕಾಂಚನ್ 5 ಲಕ್ಷ, ಮಸ್ಕತ್ ಸಂಘಟನೆ 3 ಲಕ್ಷ, ಮೀನು ಮಾರಾಟ ಫೆಡರೇಶನ್ 2 ಲಕ್ಷ, ಮೋಹನ ಬೆಂಗ್ರೆ 2 ಲಕ್ಷ, ಅನಿಲ್ ಕುಮಾರ್ 2 ಲಕ್ಷ, ಸಂಧ್ಯಾ ಸುನಿಲ್ 2 ಲಕ್ಷ, ಮೆಂಡನ್ ಮೂಲಸ್ಥಾನ, ದಿನೇಶ್ ಎರ್ಮಾಳು, ಪವನ್ ಆನಂದ್, ಯಜ್ಞೇಶ್, ತಲಾ ಒಂದು ಲಕ್ಷ, ಶಶಿಕುಮಾರ್ 25 ಸಾವಿರ ಮೊದಲಾದವರು ದೇಣಿಗೆ ಸಮರ್ಪಿಸಿದರು.
ಅಂಗದಾನ ನೋಂದಣಿ
ಅಧ್ಯಕ್ಷತೆ ವಹಿಸಿದ್ದ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿ, ಮಣಿಪಾಲ ಆಸ್ಪತ್ರೆ ಸಹಯೋಗದೊಂದಿಗೆ ಅಂಗಾಂಗ ದಾನ ನೋಂದಣಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಚ್ಚಿಲ ದೇವಳ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉಡುಪಿ ಶಾಸಕ ಯಶಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲಿಯಾನ್, ಹರಿಯಪ್ಪ ಕೊಟ್ಯಾನ್, ಯುವರಾಜ್ ಸಾಲಿಯಾನ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ವೇದಪ್ರಕಾಶ್ ಶ್ರೀಯಾನ್, ರವಿ ಕರ್ಕೇರ, ಸದಾಶಿವ ಬಂಗೇರ, ಉದಯ ಕುಮಾರ್ ಹಟ್ಟಿಯಂಗಡಿ, ಅನಿಲ್ ಕುಮಾರ್ ಬೊಕ್ಕಪಟ್ಣ, ಚೇತನ್ ಬೆಂಗ್ರೆ, ನಾಗರಾಜ್, ದಿನೇಶ್ ಎರ್ಮಾಳ್, ಸತೀಶ್ ಅಮೀನ್ ಬಾರ್ಕೂರು, ಭಾಸ್ಕರ ಸಾಲಿಯಾನ್, ಶ್ರೀನಿವಾಸ ತೀರ್ಥಹಳ್ಳಿ, ಸಂಧ್ಯಾ ಸುನಿಲ್, ಕವಿತಾ ಶರತ್, ಸುಗುಣಾ ಮೂಳೂರು, ರಾಜೇಶ್ ಪುತ್ರನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಪವನ್ ಆನಂದ್, ಸದಾನಂದ ಬಳ್ಕೂರು, ಮನೋಜ್ ಕಾಂಚನ್, ದಯಾಕರ ಸುವರ್ಣ, ಶಶಿಕುಮಾರ್ ಬೆಂಗ್ರೆ, ಬೇಬಿ ಸಾಲಿಯಾನ್, ಲಕ್ಷ್ಮಣ ಕೋಡುಕಲ್, ರವಿ ಕೊರವಡಿ ಮೊದಲಾದವರಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ನಿರೂಪಿಸಿದರು.

.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)