ಮಂಗಳೂರಿನಿಂದ ಗಲ್ಫ್ ವಿಮಾನ ಹಾರಾಟ ರದ್ದು

ಲೋಕಬಂಧು ನ್ಯೂಸ್, ಮಂಗಳೂರು
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ಜಂಟಿ ದಾಳಿ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತಮ್ಮ ವಾಯುಪ್ರದೇಶಗಳನ್ನು ಮುಚ್ಚಿದೆ. ಆ ಹಿನ್ನೆಲೆಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ಗೆ ತೆರಳುವ, ಆಗಮಿಸುವ ವಿಮಾನ ಯಾನ ಸಂಚಾರ ರದ್ದಾಗಿದೆ.ಇರಾನ್ ಮೇಲೆ ದಾಳಿ ಪ್ರಾರಂಭವಾಗುವ ಮುಂಚೆಯೇ ಮಂಗಳೂರಿನಿಂದ ದೋಹಾಕ್ಕೆ ತೆರಳಲು ಟೇಕಾಫ್ ಆಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ 7 ಗಂಟೆಗೆ ಲ್ಯಾಂಡ್ ಆಗಿದೆ.