ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು | ಲೋಕಬಂಧು ನ್ಯೂಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌ನ್ನು ಶುಕ್ರವಾರ (ಮಾರ್ಚ್ 6) ಮಂಡಿಸಿದ್ದು, ರಾಜ್ಯದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿದೆ.
2026ನೇ ಬಜೆಟ್ ಮಂಡನೆ ಮೂಲಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ದಾಖಲೆ ಮಾಡಿದ್ದಾರೆ.
ಈ ಹಿಂದೆ ರಾಮಕೃಷ್ಣ ಹೆಗಡೆ13 ಬಾರಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು 8 ಬಾರಿ ಬಜೆಟ್ ಮಂಡಿಸಿದ್ದರೆ, ಸಿದ್ದರಾಮಯ್ಯ 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದ್ದಾರೆ.
ಈಗಾಗಲೇ ಮತ್ತೊಂದು ದಾಖಲೆ
ಸಿದ್ದರಾಮಯ್ಯ ಅವರು ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಈ ವರ್ಷದ ಆರಂಭದಲ್ಲೇ ಪಾತ್ರರಾಗಿದ್ದಾರೆ. ಈಗ ದಾಖಲೆಯ 17ನೇ ಬಜೆಟ್ ಮಂಡನೆಯ ಮೂಲಕ ಮತ್ತೊಂದು ರಾಜಕೀಯ ಮೈಲುಗಲ್ಲು ನಿರ್ಮಿಸಿದ್ದಾರೆ.


ಜನತೆಗೆ ನೇರ ಪ್ರಸಾರ
ರಾಜ್ಯದ ಜನತೆಗೆ ಬಜೆಟ್ ಕುರಿತು ನೇರವಾಗಿ ಮಾಹಿತಿ ದೊರಕುವಂತೆ ವಿವಿಧ ಮಾಧ್ಯಮಗಳಲ್ಲಿ ಬಜೆಟ್ ಮಂಡನೆಯ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಸುದ್ದಿ ಸಂಸ್ಥೆಗಳು ಹಾಗೂ ಡಿಜಿಟಲ್ ವೇದಿಕೆಗಳ ಮೂಲಕ ಜನರು ಬಜೆಟ್ ಭಾಷಣವನ್ನು ಲೈವ್ ವೀಕ್ಷಿಸುವ ಅವಕಾಶ ಮಾಡಲಾಗಿದೆ.


ಮಾ.27ರ ವರೆಗೆ ಬಜೆಟ್ ಅಧಿವೇಶನ
ರಾಜ್ಯದ ವಿಧಾನ‌ ಮಂಡಲ ಹಾಗೂ ಪರಿಷತ್'ಗಳಲ್ಲಿ ನಡೆಯಲಿರುವ ಬಜೆಟ್ ಅಧಿವೇಶನ ಮಾರ್ಚ್ 6ರಿಂದ 27ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು 14 ದಿನಗಳ ಕಾಲ ಬಜೆಟ್ ಸಂಬಂಧಿತ ಚರ್ಚೆಗಳು ನಡೆಯಲಿವೆ.


ವಿಧಾನಸಭೆಯಲ್ಲಿ ಬಜೆಟ್ ಮಂಡನೆ ನಂತರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅನುದಾನ, ಯೋಜನೆಗಳು ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಲಿದ್ದಾರೆ.