ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಕ್ಯಾಂಪಸ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾರ್ಪಳ್ಳಿಯ ಸೋನಲ್ ನಾಯಕ್ ಅವರಿಗೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಲಾಯಿತು.
ಪರಿಸರ ಸ್ನೇಹಿ, ಹಸಿರು ವ್ಯವಹಾರಗಳಲ್ಲಿ ಅನುಸರಿಸುವ ಉದ್ಯಮಶೀಲತಾ ಪ್ರಕ್ರಿಯೆ ಕುರಿತು ಪ್ರಬಂಧ ಮಂಡಿಸಿದ್ದರು.
ಬೋಸ್ಟನ್, ಚಿಕಾಗೊ ಮತ್ತು ಫ್ರಾಂಕ್‌ಫರ್ಟ್'ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಅವರು ತನ್ನ ಸಂಶೋಧನೆಯನ್ನು ಮಂಡಿಸಿದ್ದಾರೆ.
ಸೋನಲ್ ನಾಯಕ್ ಅವರು ಡಾ.ರವೀಂದ್ರನಾಥ್ ನಾಯಕ್ ಮತ್ತು ಜ್ಯೋತಿ ನಾಯಕ್ ದಂಪತಿ ಪುತ್ರಿ.
