ಹನುಮಾನ್ ಚಾಲೀಸಾ ಗ್ರಂಥ- ಧ್ವನಿಸುರುಳಿ ಬಿಡುಗಡೆ

ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಹನುಮ ಜಯಂತಿಯ ಶುಭ ಸಂದರ್ಭಕ್ಕಾಗಿ ಸಿದ್ಧಪಡಿಸಿದ 'ಹನುಮಾನ್ ಚಾಲೀಸಾ'ದ  ಗ್ರಂಥ ಮಾದರಿಯ ಸಾಂಪ್ರದಾಯಿಕ ಕಿರುಹೊತ್ತಗೆ ಹಾಗೂ ಧ್ವನಿ ಸುರುಳಿಯನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಂಗಳವಾರ ಗೀತಾಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಸಾಂಪ್ರದಾಯಿಕ ದಾರ ಮತ್ತು ಮಣಿಯಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿರುವ ಈ ಪ್ರಾರ್ಥನಾ ಪುಸ್ತಕ ಭಕ್ತಿ, ನಂಬಿಕೆ ಮತ್ತು ದೈವಿಕ ರಕ್ಷಣೆಯ ನಿರಂತರ ಒಡನಾಡಿಯಾಗಿದೆ. ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಣದ ಮೂಲಕ ಈ ಬಾರಿಯ ಹನುಮ ಜಯಂತಿ ಹನುಮ, ರಾಮ ಹಾಗೂ ಕೃಷ್ಣ ಭಕ್ತರಿಗೆ ಅಷ್ಟೇ ಅಲ್ಲದೆ ಸಮಸ್ತ ಆಸ್ತಿಕ ಲೋಕಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ ಎಂದರು.


ಧ್ವನಿಸುರುಳಿಗೆ ಕಂಠದಾನ ಮಾಡಿದ ಮಠದ ವಿದ್ವಾಂಸ ಕೆ.ವಿ. ರಮಣ್ ಆಚಾರ್ಯ ಹಾಗೂ ವಿದುಷಿ ಅಯನಾ ವಿ. ರಮಣ್ ಅವರು ಹನುಮಾನ್ ಚಾಲೀಸಾ ಪಠಿಸಿದರು. ಮೈಸೂರಿನ ಎನ್. ರಂಗರಾವ್ ಆ್ಯಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ವಿಶೇಷ ಭಕ್ತಿ ಕಾಣಿಕೆಯನ್ನು ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಿಸಿದೆ.