ಕೃಷ್ಣಮಠಕ್ಕೆ ಶಾಸಕ ಆರಣಿ ಭೇಟಿ

ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಆಂಧ್ರಪ್ರದೇಶದ ತಿರುಪತಿ ಕ್ಷೇತ್ರದ ಶಾಸಕ ಅರಣಿ ಶ್ರೀನಿವಾಸ್ ಅವರು ಮಂಗಳವಾರ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ಈ ಸಂದರ್ದಲ್ಲಿ ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಹಾಗೂ ಮಠದ ಅಧಿಕಾರಿಗಳಾದ ಮೋಹನ ಭಟ್, ಮಧುಕರ್ ಮುದ್ರಾಡಿ ಮೊದಲಾದವರಿದ್ದರು.