ಲೋಕಬಂಧು ನ್ಯೂಸ್ | ಉಡುಪಿ, ಏ.2
ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಹನುಮ ಜಯಂತಿಯಂದು ಗುರುವಾರ ಶ್ರೀ ದೇವಳಕ್ಕೆ ಬೃಹತ್ ಘಂಟೆ ಸಮರ್ಪಿಸಲಾಯಿತು.
ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಬೃಹತ್ ಘಂಟೆಯನ್ನು ಉದ್ಘಾಟಿಸಿದರು.
ಹನುಮಾನ್ ಚಾಲೀಸಾ ಪಠನ
ಬಳಿಕ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠನಕ್ಕೆ ಚಾಲನೆ, ಮಕ್ಕಳು ಹಾಗೂ ವಿವಿಧ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಸರೋಜಿನಿ ಜಯ ಶೆಟ್ಟಿ ಸಂಪಾದಿತ ಕಾರ್ಣಿಕದ ಕ್ಷೇತ್ರ ಇಂದ್ರಾಣಿ ಪುಸ್ತಕವನ್ನು ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಇಂದ್ರಾಣಿ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಯೋಗೀಶ ಭಟ್ ಮೊದಲಾದವರಿದ್ದರು.
.jpg)

.jpg)