ಕಾಪು: ಕರಾವಳಿಯ ಹಲವಾರು ದೇವಾಲಯಗಳು ಜೀರ್ಣೋದ್ಧಾರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಜಗತ್ತಿನಾದ್ಯಂತದ ಅಮ್ಮನ ಭಕ್ತರ ಸಹಕಾರ ಮತ್ತು ಹಾರೈಕೆಯೊಂದಿಗೆ ಜೀರ್ಣೋದ್ಧಾರಗೊಂಡಿರುವ ಕಾಪು ಅಮ್ಮನ ದಿವ್ಯಕ್ಷೇತ್ರ ತುಳುನಾಡಿಗೆ ಮುಕುಟಪ್ರಾಯವಾಗಿ ಮೂಡಿಬಂದಿದೆ ಎಂದು ಬೆಂಗಳೂರು ಎಂ.ಆರ್.ಜೆ. ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.ಕಾಪು ಶ್ರೀ ಹೊಸಮಾರಿಗುಡಿ ದಿವ್ಯಕ್ಷೇತ್ರದ ಪ್ರಥಮ ವರ್ಧಂತ್ಯುತ್ಸವ 'ಮಾತೃ ವೈಭವ' ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಬಂಟ್ವಾಳ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮಾತೃ ಶಕ್ತಿಯ ಅಗತ್ಯ ಇಂದಿನ ಸಮಾಜಕ್ಕೆ ಅತೀ ಅವಶ್ಯಕವಾಗಿದೆ. ಕಾಪುವಿನ ಅಮ್ಮನ ಚೈತನ್ಯ ಶಕ್ತಿ ಅದಮ್ಯ. ಭಕ್ತರನ್ನು ಸಲಹುತ್ತಾ ಮಾತೃ ಸ್ಥಾನದಲ್ಲಿ ಅಕೆ ವಿರಾಜಮಾನಳಾಗಿದ್ದಾಳೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಜಾತಿ-ಮತ ಮೀರಿ ಹಿಂದೂ ಸಮಾಜ ಬೆಳೆಯಬೇಕಿದ್ದು ಕಾಪು ಅಮ್ಮನ ಕ್ಷೇತ್ರ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಮುನ್ನಡೆಯುತ್ತಿರವುದು ಆಶಾದಾಯಕ ವಿಚಾರ ಎಂದರು.
ಶ್ರೀ ಹೊಸ ಮಾರಿಗುಡಿ ದಿವ್ಯಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅನಿಲ್ ಬಳ್ಳಾಲ್, ಮುಂಬೈ ತುಂಗಾ ಗ್ರೂಪ್ ಆಫ್ ಹೋಟೆಲ್ಸ್'ನ ಸುಧಾಕರ್ ಹೆಗ್ಡೆ, ಮುಂಬೈ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್'ನ ರವಿ ಸುಂದರ್ ಶೆಟ್ಟಿ, ಮುಂಬೈ ಉಚ್ಛ ನ್ಯಾಯಾಲಯದ ವಕೀಲ ಮಹೇಶ್ ಕೋಟ್ಯಾನ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಅದಾನಿ ಸಂಸ್ಥೆ ಉಪಾಧ್ಯಕ್ಷ ಕಿಶೋರ್ ಆಳ್ವ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಸುಗ್ಗಿ ಸುಧಾಕರ್ ಶೆಟ್ಟಿ ಹುಬ್ಬಳ್ಳಿ, ಪೂನಾ ಬಂಟ್ಸ್ ಸಂಘದ ಸಂತೋಷ್ ಶೆಟ್ಟಿ ಇನ್ನ, ವಿಶ್ವ ದೇವಾಡಿಗರ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ರಂಜನಿ ಸುಧಾಕರ ಹೆಗ್ಡೆ ಅತಿಥಿಗಳಾಗಿದ್ದರು.
ವ್ಯವಸ್ಥಾಪನ ಸಮಿತಿ
ಸದಸ್ಯರಾದ ಮಾಧವ ಆರ್. ಪಾಲನ್, ಶೇಖರ್ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತ ದೇವಾಡಿಗ ಇದ್ದರು.
ಈ ಸಂದರ್ಭದಲ್ಲಿ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿದರು. 'ಮಾತೃ ವೈಭವ' ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ವಂದಿಸಿದರು ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.