ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಪ್ರಯುಕ್ತ ಮಂಗಳವಾರ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಾಮೂಹಿಕ ಗ್ರಹಣ ಶಾಂತಿ ನಡೆಸಲಾಯಿತು.ಗಣೇಶ ಸರಳಾಯ ನೇತೃತ್ವದಲ್ಲಿ ವಿಜಯ ಭಟ್, ವಿಜಯೇಂದ್ರ ಮೇಲಾಂಟ ಹಾಗೂ ಅನಿಶ್ ಆಚಾರ್ಯ ಸಹಕಾರದೊಂದಿಗೆ ಗ್ರಹಣ ಮಧ್ಯಕಾಲದಲ್ಲಿ ಶಾಂತಿಗೆ ಚಾಲನೆ ನೀಡಲಾಯಿತು.
ಗ್ರಹಣ ಸ್ಪರ್ಷಕಾಲದಿಂದಲೇ ಕ್ಷೇತ್ರದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಪಠನೆ, ಶ್ರೀ ಲಕ್ಷ್ಮೀ ಶೋಭಾನೆ, ವಿಷ್ಣು ಸಹಸ್ರನಾಮ ಪಾರಾಯಣ ಪಠನೆ ಹಾಗೂ ಭಜನೆ ಸಂಕೀರ್ತನೆಗಳು ನಿರಂತರವಾಗಿ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.