ಲೋಕಬಂಧು ನ್ಯೂಸ್, ಉಡುಪಿ
ಮಂಗಳೂರಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗಾಗಿ ಕೊಡುಗೆಯಾಗಿ ನೀಡಿದ ಎಕ್ಸ್ ರೇ ಯಂತ್ರವನ್ನು ಸಂಸ್ಥೆ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಶನಿವಾರ (ಮಾರ್ಚ್, 7) ನೇವರಿಸಿದರು.ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಎಕ್ಸ್ ರೇ ಸೇವೆಯಲ್ಲಿ ವ್ಯತ್ಯಯದಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೀನು ಮಾರಾಟ ಫೆಡರೇಶನ್ ಮೂಲಕ ಜಿಲ್ಲಾಸ್ಪತ್ರೆಗೆ ನೂತನ ಎಕ್ಸ್ ರೇ ಯಂತ್ರ ನೀಡಿದ್ದು, ಅದರಿಂದ ಜಿಲ್ಲಾಸ್ಪತ್ರೆಗೆ ದಿನನಿತ್ಯ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲಾಸ್ಪತ್ರೆ ಸರ್ಜನ್ ಡಾ. ಅಶೋಕ್ ಎಕ್ಸ್ ರೇ ಯಂತ್ರದ ಕೊಡುಗೆ ನೀಡಿದ ಶಾಸಕ ಯಶಪಾಲ್ ಸುವರ್ಣ ಹಾಗೂ ಸಂಸ್ಥೆಯ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೀನು ಮಾರಾಟ ಫೆಡರೇಶನ್ ಉಪಾಧ್ಯಕ್ಷ ದೇವಪ್ಪ ಕಾಂಚನ್, ನಿರ್ದೇಶಕರಾದ ರಾಮಚಂದ್ರ ಕುಂದರ್ ಮತ್ತು ಸುರೇಶ್ ಸಾಲ್ಯಾನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ರಶ್ಮಿ ಸಿ. ಭಟ್, ಸುಂದರ ಕಲ್ಮಾಡಿ, ಯೋಗೀಶ್ ಸಾಲ್ಯಾನ್, ಲ ಟಿ. ಜಿ. ಹೆಗ್ಡೆ, ಹರೀಶ್ ಶೆಟ್ಟಿ ಮತ್ತು ಎಡ್ಲಿನ್ ಕರ್ಕಡ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ಜಗನ್ನಾಥ ಕಡೆಕಾರ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ನಾಗರಾಜ ಸುವರ್ಣ, ರತ್ನಾಕರ ಸಾಲ್ಯಾನ್, ಸುಂದರ ಸಾಲ್ಯಾನ್, ವಿನಯ ಕರ್ಕೇರ, ಕರುಣಾಕರ ಸಾಲ್ಯಾನ್, ನಾಗರಾಜ ಕುಂದರ್, ಮಿಥುನ್ ಕುಂದರ್, ಕೃಷ್ಣ ಕೋಟ್ಯಾನ್ ಮತ್ತು ಗೀತಾ ಕರ್ಕೇರ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಪ್ರಮುಖರಾದ ಸುನಿಲ್ ನೇಜಾರು, ಸುಭಾಷಿತ್, ರಾಘವೇಂದ್ರ ಆಚಾರ್ಯ, ಸುನೀತಾ ಭಂಡಾರಿ ಮತ್ತು ಸುಧಾಕರ ಪ್ರಭು, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ, ವೈದ್ಯರಾದ ಡಾ.ಆಮ್ನ ಮೊದಲಾದವರಿದ್ದರು.