ಕೃಷ್ಣ ಮಠಕ್ಕೆ ಹುಕ್ಕೇರಿ ಸ್ವಾಮೀಜಿ ಭೇಟಿ

ಉಡುಪಿ: ಹುಕ್ಕೇರಿ ಹಿರೇಮಠದ ಮಠಾಧೀಶ ಹಾಗೂ ಬೆಂಗಳೂರು ಅ.ಭಾ. ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಕೊಣ್ಣೂರು ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮೀಜಿ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಮಾಡಿದರು.
ಬಳಿಕ ಪರ್ಯಾಯ ಶೀರೂರು ಮಠಾಧೀಶ  ಶ್ರೀ ವೇದವರ್ಧನತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು.
ಈ ಸಂಧರ್ಭದಲ್ಲಿ ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ವೀರಶೈವ ಲಿಂಗಾಯತ ಮಹಾಸಭಾ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.