ಕೃಷ್ಣಮಠದಲ್ಲಿ ಹೋಳಿಹಬ್ಬ ಆಚರಣೆ

ಉಡುಪಿ: ಹೋಳಿ ಹುಣ್ಣಿಮೆ ಅಂಗವಾಗಿ ಮಂಗಳವಾರ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ಹೋಳಿ ಆಚರಣೆ ಹಾಗೂ ಅವಭೃತ ನಡೆಯಿತು.ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆದೇಶದಂತೆ ಪರಸ್ಪರ ಬಣ್ಣ ಎರಚಿಕೊಳ್ಳಲಾಯಿತು. ಮಧ್ವ ಸರೋವರದಲ್ಲಿ ಮಂಗಳಸ್ನಾನ ನಡೆಸಲಾಯಿತು.


ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನ ಡಾ.ಉದಯ ಕುಮಾರ ಸರಳತ್ತಾಯ,  ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಮೊದಲಾದವರು ಉಪಸ್ಥಿತರಿದ್ದರು.