ಕೃಷ್ಣಮಠದಿಂದ ಕಡಿಯಾಳಿಗೆ ಹೋಳಿ

ಉಡುಪಿ: ಪರ್ಯಾಯ ಶೀರೂರು
ಶ್ರೀ ಕೃಷ್ಣ ಮಠ ವತಿಯಿಂದ ಹೋಳಿ ಹಬ್ಬ ಆಚರಣೆಯ ಪ್ರಯುಕ್ತ ಸಂಪ್ರದಾಯದಂತೆ ಸೋಮವಾರ ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕೃಷ್ಣಮಠದಲ್ಲಿ ಪ್ರಾರ್ಥನೆ ಸಲ್ಲಿಸಿ, ಹೋಳಿ ಬಣ್ಣದೊಂದಿಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಲಾಯಿತು.ಅಲ್ಲಿನ ಪ್ರಸಾದ ಪಡೆದುಕೊಂಡು ಬಣ್ಣವನ್ನು ವಾಪಾಸು ಕೃಷ್ಣ ಮಠಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಶೀರೂರು ಮಠದ  ದಿವಾನ ಡಾ.ಉದಯ ಕುಮಾರ ಸರಳತ್ತಾಯ,  ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಹಾಗೂ  ಮಠದ ಭಕ್ತರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.