ಕೃಷ್ಣಮಠದಲ್ಲಿ ಹೋಳಿಕುಣಿತ

ಉಡುಪಿ: ಹೋಳಿ ಹಬ್ಬದ ಪ್ರಯುಕ್ತ ಸಂಪ್ರದಾಯದಂತೆ ಮರಾಠಿ ನಾಯ್ಕ ಸಮುದಾಯದವರಿಂದ ಶ್ರೀಕೃಷ್ಣ ಮಠದಲ್ಲಿ ಹೋಳಿ ಕುಣಿತ ನಡೆಯಿತು.ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ವತಿಯಿಂದ ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಅವರು ಸಂಪ್ರದಾಯದಂತೆ ಸಂಭಾವನೆ ನೀಡಿ ಗೌರವಿಸಿದರು. ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಇದ್ದರು.