ಗ್ಯಾರಂಟಿಗೆ ಸೀಮಿತವಾದ ಬಜೆಟ್

ಉಡುಪಿ | ಲೋಕಬಂಧು ನ್ಯೂಸ್
ಸಿದ್ದರಾಮಯ್ಯ 17ನೇ ಬಾರಿ ಮಂಡಿಸಿದ ಬಜೆಟ್ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾದಂತಿದೆ ಎಂದು ರಾಜಕೀಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ವಿನಿಯೋಗಿಸಲಾಗಿದೆ. ಕಾಲೇಜು ಮತ್ತು ವಿ.ವಿ.ಗಳಲ್ಲಿ ಚುನಾವಣೆ ನಡೆಸುವುದು ಬಜೆಟ್‌ನಲ್ಲಿ ಪ್ರಕಟಿಸುವ ಯೋಜನೆ ಅಲ್ಲ. ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದ ಕುರಿತು ಪ್ರಸ್ತಾಪವಿಲ್ಲ.


ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಕೃಷಿ ಕಾಲೇಜು, ಮೆಡಿಕಲ್ ಕಾಲೇಜಿನ ಪ್ರಸ್ತಾಪ ಇಲ್ಲ. ಅಭಿವೃದ್ಧಿ ಪರವಾದ ಯಾವುದೇ ಯೋಜನೆಗಳಿಗೆ ಆದ್ಯತೆ ನೀಡಲಾಗಿಲ್ಲ. ಆದರೆ, ಕರಾವಳಿಯವರಿಗೆ ಕಾಲುಸಂಕ ಭಾಗ್ಯವಷ್ಟೇ ಸಿಕ್ಕಿದೆ ಎಂದು ಪ್ರೊ. ಸುರೇಂದ್ರನಾಥ ಶೆಟ್ಟಿ ವಿಶ್ಲೇಷಿಸಿದ್ದಾರೆ.