ನೂಯಿ ಮಹೇಶ ಭಟ್ ನಿಧನ

ಲೋಕಬಂಧು ನ್ಯೂಸ್, ಮೂಡುಬಿದಿರೆ
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ನೂಯಿ‌ ಮಹೇಶ ಭಟ್ ಅವರು ಬೆಂಗಳೂರಿನಲ್ಲಿ ಗುರುವಾರ ನಿಧನರಾದರು.ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜ್ ಮತ್ತು ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಪರಮ ಭಕ್ತರಾಗಿದ್ದ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮಿತಭಾಷಿ ಹಾಗೂ ಸೌಮ್ಯ ಸ್ವಭಾವದವರಾಗಿದ್ದರು.


ಮಹೇಶ್ ಭಟ್ ನಿಧನಕ್ಕೆ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೃಷ್ಣಮೂರ್ತಿ ವಿ.ಎ. ಅಶ್ವತ್ಥಪುರ ಸೇರಿದಂತೆ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿ, ಸದ್ಗತಿಗಾಗಿ ಪ್ರಾರ್ಥಿಸಿದ್ದಾರೆ.