ಎನ್ಎಚ್ ಇಂಜಿನಿಯರ್ ಮಂಜುನಾಥ ನಾಯಕ್ ನಿಧನ

ತೀರ್ಥಹಳ್ಳಿ | ಲೋಕಬಂಧು ನ್ಯೂಸ್
ರಾಷ್ಟ್ರೀಯ ಹೆದ್ದಾರಿ ಇಲಾಖೆ ಶೃಂಗೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ ನಾಯಕ್  ಶುಕ್ರವಾರ (ಮಾರ್ಚ್ 6) ಹೃದಯಾಘಾತದಿಂದ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


ತೀರ್ಥಹಳ್ಳಿ, ಶೃಂಗೇರಿ, ಉಡುಪಿ, ಮಣಿಪಾಲ, ಕಾರ್ಕಳ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಲವು ಪ್ರಮುಖ ಕಾಮಗಾರಿಗಳ ಅನುಷ್ಠಾನದಲ್ಲಿ ಮಂಜುನಾಥ ನಾಯಕ್ ಪಾತ್ರ ಪ್ರಮುಖವಾಗಿತ್ತು. ಸ್ನೇಹಶೀಲ ವ್ಯಕ್ತಿತ್ವ, ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.