ಉಡುಪಿ | ಲೋಕಬಂಧು ನ್ಯೂಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 17ನೇ ಬಜೆಟ್ ದಾಖಲೆಗೆ ಮಾತ್ರ, ರಾಜ್ಯದ ಸರ್ವತೋಮುಖ ಬೆಳವಣಿಗೆ ಶೂನ್ಯ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ತಿಳಿಸಿದ್ದಾರೆ.
16 ವರ್ಷದ ಕೆಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿರುವುದು ಸ್ವಾಗತಾರ್ಹ. ಆದರೆ, ಬಜೆಟ್‌ನ ಕೆಲವು ಘೋಷಣೆಗಳು ಘೋಷಣೆಗೆ ಮಾತ್ರ ಸೀಮಿತವಾದ ಯೋಜನೆಗಳಾಗಿದ್ದು ಅನುಷ್ಠಾನ ಕಷ್ಟ.
ವಿತ್ತೀಯ ಕೊರತೆ ಹೆಚ್ಚಾಗಿ ಒಟ್ಟಾರೆ ಸಾಲದ ಪ್ರಮಾಣ ಅತಿಯಾಗಿದೆ. ನೀರಸ ಬಜೆಟ್ ಇದಾಗಿದ್ದು ಜನಸಾಮಾನ್ಯರು, ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಿಲ್ಲ.
ಬಜೆಟ್‌ನ ಅಂಕಿ ಅಂಶಗಳೇ ಪ್ರಶ್ನಾತೀತವಾಗಿದ್ದು, ಕರಾವಳಿಯ ಜಿಲ್ಲೆಗಳಿಗೆ ಏನೂ ಇಲ್ಲದ ಬಜೆಟ್ ಆಗಿದೆ ಎಂದು ಯೋಗೀಶ ಶೆಟ್ಟಿ ವಿಶ್ಲೇಷಿಸಿದ್ದಾರೆ.
