ಸೊರಕೆ ಸುಳ್ಳಿನ ವಿರುದ್ಧ ಗುರ್ಮೆ ಸತ್ಯದ ಪ್ರಾರ್ಥನೆ

ಲೋಕಬಂಧು ನ್ಯೂಸ್, ಕಾಪು
ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ದುರುದ್ದೇಶಪೂರಿತ ರಾಜಕೀಯ ಸುಳ್ಳು ಆರೋಪಗಳ ವಿರುದ್ಧ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ (ಮಾರ್ಚ್ 7) ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಹಾಗೂ ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ತನ್ನ ವಿರುದ್ಧ ಸೊರಕೆ ನಿರಂತರವಾಗಿ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದು ಕಾಪು ಮಾರಿಯಮ್ಮ ಹಾಗೂ ಬಬ್ಬುಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ನನ್ನ ಸತ್ಯವನ್ನು ದೇವರಿಗೆ ಅರ್ಪಿಸಿದ್ದೇನೆ. ಇನ್ನಾದರೂ ಸೊರಕೆಯವರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ‌ ಹೇಳಿದರು.ಗುರ್ಮೆ  ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಪ್ರಮುಖರು ಇದ್ದರು.